ಪಿತೃಯಾನ -
ಮನುಷ್ಯನ ಮರಣೋತ್ತರದ ಸ್ಥಿತಿಯನ್ನು ಕುರಿತಂತೆ ಉಪನಿಷತ್ತುಗಳಲ್ಲಿ ಈ ಮಾತು ಬಂದಿದೆ. ಬದುಕಿದ್ದಾಗ ಯಾವ ರೀತಿಯಲ್ಲಿ ಮನುಷ್ಯ ಬದುಕುತ್ತಾನೆಯೋ ಆ ರೀತಿಗೆ ಅನುಗುಣವಾಗಿ ಅವನ ಮರಣೋತ್ಸರ್ಗ ರೂಪುಗೊಳ್ಳುತ್ತದೆ ಎಂಬುದು ಇದರ ಭಾವ. ಪಿತೃಪೂಜೆ ಮಾಡತಕ್ಕವನು ಪಿತೃಲೋಕಕ್ಕೆ ಪಿತೃಯಾನದಲ್ಲಿ ಹೋಗುತ್ತಾನೆ. ದೇವತೆಗಳನ್ನು ಪೂಜಿಸತಕ್ಕವನು ದೇವಯಾನದ ಮೂಲಕ ದೇವಲೋಕಕ್ಕೆ ಹೋಗುತ್ತಾನೆ ಎಂದು ನಂಬಿಕೆ. ಭಗವದ್ಗೀತೆಯು ಇದನ್ನು ಸಮರ್ಥಿಸುತ್ತದೆ. ಯದ್ಭಾವಂ ತದ್ಭವತಿ ತತ್ತ್ವವನ್ನು ಇದರಲ್ಲಿ ಕಾಣಬಹುದು.									 (ಎಂ.ವೈ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ